    ಮೂಲದೊಡನೆ ಪರಿಶೀಲಿಸಿ

ಆಸ್ಟಟೀನ್

ಅತ್ಯಧಿಕ ಭಾರದ ಹ್ಯಾಲೊಜನ್, ವಿಕಿರಣಪಟು ಧಾತು ಪ್ರತೀಕ ಂಣ, ಪರಮಾಣು ಸಂಖ್ಯೆ 85. 1940 ರಲ್ಲಿ ಸೆಗ್ರೆ, ಮೆಕೆನ್ಜೀ ಮತ್ತು ಕಾರ್ಸನ್ ಇವರು ಬಿಸ್ಮತ್ 209ನ್ನು ಆಲ್ಫ ಕಣದಿಂದ ತಾಡಿಸಿ 211 ತೂಕದ ಈ ಧಾತುವಿನ ಸಮಸ್ಥಾನಿಯೊಂದನ್ನು (ಐಸೊಟೋಪ್) ತಯಾರಿಸಿದರು. 
		83ಃi209+2ಊe4→85ಂಣ211+2ಟಿ

ಇದರ ಅರ್ಧಾಯು 7.5 ಗಂಟೆ. 201-219ವರೆಗೆ ತೂಕವಿರುವ ಅನೇಕ ಸಮಸ್ಥಾನಿಗಳಿವೆ. ಅವುಗಳಲ್ಲಿ ಕೆಲವು ವಿವಿಧ ವಿಕಿರಣ ಶ್ರೇಣಿಗಳಲ್ಲಿ ಕಂಡುಬರುವುದಾದರೂ ಯಾವುದಕ್ಕೂ ಅರ್ಧಾಯು 8.5 ಗಂಟೆಗಳಿಂತ ಹೆಚ್ಚಿಗೆ ಇಲ್ಲ. ರಾಸಾಯನಿಕವಾಗಿ ಇದು ಹ್ಯಾಲೊಜನ್. ಅಂತೆಯೇ ಂಣ-, ಂಣಔ-, ಂಣಔ3-, ಅಯಾನುಗಳನ್ನು ಗುರುತಿಸಲಾಗಿದೆ. ಆವರ್ತಕೋಷ್ಟಕದಲ್ಲಿ ಇದರ ಸಮೀಪವಿರುವ, ಧಾತುಗಳನ್ನು ಶಕ್ತಿಯುತವಾದ ಕಣಗಳಿಂದ ಘಾತಿಸುವುದರಿಂದಲೂ ಆಸ್ಟಟೀನನ್ನು ತಯಾರಿಸಬಹುದು. ಉದಾಹರಣೆಗೆ ಂu197 (ಅ12, 4ಟಿ) ಂಣ205. ಇದು ಹ್ಯಾಲೋಜನ್ ಮತ್ತು ಅಯೊಡೀನ್‍ಗಿಂತ ಹೆಚ್ಚು ಲೋಹಗುಣವುಳ್ಳದ್ದೆಂದು ಕಂಡುಬಂದಿದೆ. ಅಲ್ಪ ಪ್ರಮಾಣದಲ್ಲಿ ನಿಸರ್ಗದಲ್ಲಿದೆಯೆಂದು ಈಚೆಗೆ ತಿಳಿದುಬಂದಿದೆ. ಅಭದ್ರ, ಅಸ್ಥಿರ ಎಂದು ಅರ್ಥವಿರುವ ಒಂದು ಗ್ರೀಕ್ ಪದದಿಂದ ಆಸ್ಟಟೀನ್ ಪದ ನಿಷ್ಪನ್ನವಾಗಿದೆ. 
 
(ಜೆ.ಆರ್.ಎಲ್.; ಎನ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ